ಐಸಿಸಿ ಏಕದಿನ ತಂಡದ ನಾಯಕ ಇವರೇನಾ?

ದುಬೈ : ಐಸಿಸಿ ವಾರ್ಷಿಕ ಕ್ರಿಕೆಟ್‌ ತಂಡಗಳು ಈಗಾಗಲೇ ಪ್ರಕಟಗೊಂಡಿದ್ದು ಏಕದಿನ ತಂಡಕ್ಕೆ ನಾಯಕನ್ನೂ ನೇಮಿಸಲಾಗಿದೆ. ಹಾಗಿದ್ದರೆ ನಾಯಕ ಯಾರು?  ಟಿ20 ತಂಡಕ್ಕೂ ನಾಯಕನನ್ನು ನೇಮಿಸಿದ್ದು ಅದರ ನಾಯಕ ಯಾರು?

ಐಸಿಸಿ ಏಕದಿನ ತಂಡದ ನಾಯಕ ಇವರೇನಾ?
ಐಸಿಸಿ ಏಕದಿನ ತಂಡದ ನಾಯಕ ಇವರೇನಾ?

Read More 

ಐಸಿಸಿ ವಾರ್ಷಿಕ ಕ್ರಿಕೆಟ್‌ ತಂಡಗಳು ಪ್ರಕಟಗೊಂಡಿದ್ದು ಏಕದಿನ ತಂಡಕ್ಕೆ ರೋಹಿತ್‌ ಶರ್ಮಾ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಟಿ20 ತಂಡಕ್ಕೆ ಸೂರ್ಯಕುಮಾರ್‌ ಯಾದವ್‌ ನಾಯಕರಾಗಿದ್ದಾರೆ.

ಏಕದಿನ ತಂಡದಲ್ಲಿ ವಿಶ್ವಕಪ್‌ ರನ್ನರ್ಸ್‌ ಅಪ್‌ ಭಾರತದ ಸರ್ವಾಧಿಕ 6 ಆಟಗಾರರಾಗಿದ್ದಾರೆ. ಆದರೆ ಚಾಂಪಿಯನ್‌ ಆಸ್ಟ್ರೇಲಿಯದ ಇಬ್ಬರಷ್ಟೇ ಸ್ಥಾನ ಪಡೆದಿದ್ದಾರೆ.ಉಳಿದಂತೆ ದಕ್ಷಿಣ ಆಫ್ರಿಕಾದ ಇಬ್ಬರು, ನ್ಯೂಜಿಲ್ಯಾಂಡ್‌ ನ ಓರ್ವ ಕ್ರಿಕೆಟಿಗರಿದ್ದಾರೆ. ಟಿ20 ತಂಡದಲ್ಲೂ ಭಾರತದ ಹೆಚ್ಚಿನ ಸಂಖ್ಯೆ ಯ ಆಟಗಾರರಿದ್ದಾರೆ. ಇಲ್ಲಿನ ನಾಲ್ವರಿಗೆ ಸ್ಥಾನ ಲಭಿಸಿದೆ.

ಐಸಿಸಿ ವನಿತಾ ಟಿ20 ತಂಡದಲ್ಲಿ ಭಾರತದ ಓರ್ವ ಆಟಗಾರ್ತಿಯಷ್ಟೇ ಕಾಣಿಸಿಕೊಂಡಿದ್ದಾರೆ. ಇವರು ದೀಪ್ತಿ ಶರ್ಮಾ . ಆದರೆ ಐಸಿಸಿ ವನಿತಾ ಏಕದಿನ ತಂಡದಲ್ಲಿ ಯಾವ ಭಾರತಿಯರಿಗೂ ಸ್ಥಾನ ಲಭಿಸಿಲ್ಲ.

ಐಸಿಸಿ ಏಕದಿನ ತಂಡ ಹೀಗಿದೆ : ರೋಹಿತ್‌ ಶರ್ಮಾ (ನಾಯಕ) ,ಶುಭಮನ್‌ ಗಿಲ್‌ , ಟ್ರ್ಯಾವಿಸ್‌ ಹೆಡ್‌, ವಿರಾಟ್‌ ಕೊಹ್ಲಿ, ಡ್ಯಾರಿಲ್‌ ಮಿಚೆಲ್‌ ಹೆನ್ರಿಕ್‌ ಕ್ಲಾಸೆನ್‌ ಮಾರ್ಕೊ ಜಾನ್ಸೆನ್‌ ,ಮೊಹಮ್ಮದ್‌ ಸಿರಾಜ್‌,ಮೊಹಮ್ಮದ್‌ ಶಮಿ,ಕುಲದೀಪ್‌ ಯಾದವ್‌ , ಆಡಂ ಝಂಪ.

ಐಸಿಸಿ ಟಿ20 ತಂಡ : ಯಶಸ್ವಿ ಜೈಸ್ವಾಲ್‌ ,ಫಿಲ್‌ ಸಾಲ್ಟ್‌ ,ನಿಕೋಲಸ್‌ ಪೂರಣ್‌ , ಸೂರ್ಯಕುಮಾರ್‌ ಯಾದವ್‌(ನಾಯಕ) , ಸಿಕಂದರ್‌ ರಝ, ಮಾರ್ಕ್‌ ಚಾಪ್ ಮನ್, ಆಲ್ಪೇಶ್‌ ರಾಮ್ ಜಾನಿ, ಮಾರ್ಕ್‌ ಅಡೈರ್‌, ರವಿ ಬಿಷ್ಣೋಯಿ,ರಿಚರ್ಡ್‌ ಎನ್ ಗರವ, ಆರ್ಷದೀಪ್‌ ಸಿಂಗ್.‌

ಐಸಿಸಿ ವನಿತಾ ಟಿ20 ತಂಡ : ಚಾಮರಿ ಅತಪಟ್ಟು(ನಾಯಕಿ) , ಲಾರಾ ವೋಲ್ವಾರ್ಟ್‌, ಬೆತ್‌ ಮೂನಿ, ಹ್ಯಾಲಿ ಮ್ಯಾಥ್ಯೂಸ್‌, ನಾಟ್‌ ಸ್ಕಿವರ್‌ ಬ್ರಂಟ್‌, ಅಮೇಲಿಯಾ ಕೆರ್, ಎಲ್ಲಿಸ್‌ ಪೆರಿ, ಆಶ್ಲಿ ಗಾರ್ಡನರ್‌,ದೀಪ್ತಿ ಶರ್ಮಾ, ಸೋಫಿ ಎಕ್ಲ್ ಸ್ಟೋನ್‌,ಮೆಗಾನ್‌ ಶಟ್.‌

 

Leave a Comment

close
Thanks !

Thanks for sharing this, you are awesome !