ಬೆಂಗಳೂರು ಜ.4:ಇಂದಿನಿಂದ ರಣಜಿ ಟ್ರೋಫಿ ಕ್ರಿಕೆಟ್ ಆರಂಭ. ದೇಶಿಯ ಕ್ರಿಕೆಟ್ ಸ್ಪರ್ಧೆಯಾದ ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಪಂದ್ಯಗಳು ದೇಶದ ವಿವಿಧ ಕಡೆಗಳಲ್ಲಿ ಇಂದು ಶುಕ್ರವಾರದಿಂದ ಆರಂಭವಾಗಲಿದೆ. ಈ ಕ್ರಿಕೆಟ್ ಕೂಟದಲ್ಲಿ 32 ತಂಡಗಳು ಭಾಗವಹಿಸುತ್ತಿದ್ದು ತಲಾ 8ರಂತೆ ನಾಲ್ಕು ಬಣಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಬಣದಲ್ಲಿ ಪ್ರತಿಯೊಂದು ತಂಡವು ಎಳು ಪಂದ್ಯಗಳನ್ನು ಆಡಲಿದೆ.ಪ್ರತಿ ಬಣದಲ್ಲಿ ಮೊದಲ ಸ್ಥಾನದಲ್ಲಿರುವ ಎರಡು ತಂಡಗಳು ಕ್ವಾರ್ಟರ್ ಫೈನಲ್ ಗೇರಲಿವೆ.
ಕರ್ನಾಟಕ ತಂಡವು ‘ಸಿ ‘ ಬಣದಲ್ಲಿದೆ.ಈ ಬಣದಲ್ಲಿ ಕರ್ನಾಟಕ ಮಾತ್ರವಲ್ಲದೆ ಪಂಜಾಬ್, ರೈಲ್ವೇಸ್, ತಮಿಳುನಾಡು, ಗೋವಾ, ಗುಜರಾತ್,ತ್ರಿಪುರ, ಮತ್ತು ಚಂಡೀಗಢ ತಂಡಗಳಿವೆ.
ಇಂದು ಶುಕ್ರವಾರ ಆರಂಭವಾಗುವ ಆರಂಭಿಕ ಪಂದ್ಯದಲ್ಲಿ ಕರ್ನಾಟಕ ತಂಡವು ಪಂಜಾಬ್ ತಂಡದ ಸವಾಲನ್ನು ಎದುರಿಸಲಿದೆ.ಈ ಪಂದ್ಯವು ಹುಬ್ಬಳ್ಳಿಯಲ್ಲಿ ನಡೆಯಲಿದೆ.
ಕಳೆದ ಬಾರಿ ಲೀಗ್ ಹಂತದಲ್ಲಿ ಅದ್ಭುತವಾಗಿ ನಿರ್ವಹಣೆ ನೀಡಿದ ಕರ್ನಾಟಕ ತಂಡವು ಮುಂದಿನ ಹಂತಕ್ಕೇ ರಲು ವಿಫಲವಾಗಿತ್ತು. ಈ ಬಾರಿ ಕರ್ನಾಟಕ ತಂಡ ಯಾವ ರೀತಿ ನಿರ್ವಹಣೆ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಹಾಲಿ ಚಾಂಪಿಯನ್ ಸೌರಾಷ್ಟ್ರ ಎ ಬಣ್ಣದಲ್ಲಿದೆ. ಮುಂಬೈ, ಬೆಂಗಾಲ, ಆಂಧ್ರ, ಕೇರಳ, ಛತ್ತೀಸ ಗಡ,ಉತ್ತರಪ್ರದೇಶ, ಅಸ್ಸಾಂ ಮತ್ತು ಬಿಹಾರ ‘ ಬಿ ‘ ಬಣ್ಣದಲ್ಲಿದೆ. ಮುಂಬಯಿ ಮೊದಲ ಪಂದ್ಯದಲ್ಲಿ ಬಿಹಾರವನ್ನು ಎದುರಿಸಲಿದೆ.