Rava Idli :ಬ್ಯುಸಿ ಮಾರ್ನಿಂಗ್ಸ್ ಗಾಗಿ ಅಂತಿಮ ಬ್ರೇಕ್ ಫಾಸ್ಟ್ ಆಯ್ಕೆ

ನೀವು ದಕ್ಷಿಣ ಭಾರತೀಯ ಪಾಕಪದ್ಧತಿಯ ಅಭಿಮಾನಿಯಾಗಿದ್ದರೆ ಹೊಸ ಮತ್ತು ರುಚಿಕರವಾದದನ್ನು ಪ್ರಯತ್ನಿಸಲು ಬಯಸುತ್ತಿದ್ದರೆ ಇಲ್ಲಿದೆ ನೋಡಿ ರವೆ ಇಡ್ಲಿ ಅಥವಾ rava idli.ಅಕ್ಕಿ ಮತ್ತು ಉದ್ದಿನಬೇಳೆ ಬದಲಿಗೆ ಕೇವಲ ರವೆಯಿಂದ ಈ ಇಡ್ಲಿಯನ್ನು ಹೆಚ್ಚು ರುಚಿಯಾಗಿ ತಯಾರಿಸಬಹುದು.ಈ ಬ್ಲಾಗ್ ಪೋಸ್ಟ್ ನಲ್ಲಿ rava idliಯನ್ನು ಹೇಗೆ ಮನೆಯಲ್ಲಿಯೇ ರುಚಿಯಾಗಿ ತಯಾರಿಸಬಹುದು ಎಂಬುದನ್ನು ನೋಡಲಿದ್ದೀರಿ.

Rava Idli
Rava Idli

 

ರವೆ ಇಡ್ಲಿಯ ಹುಟ್ಟೂರು ದಕ್ಷಿಣ ಭಾರತದ ಕರ್ನಾಟಕ ರಾಜ್ಯ. ಭಾರತದ ಪ್ರಸಿದ್ಧ ಆಹಾರ ಕಂಪೆನಿಯಾದ MTR ಫುಡ್ಸ್ ನಿಂದ ರಚಿಸಲ್ಪಟ್ಟಿದೆ. rava idli ಯು ಎರಡನೇ ಮಹಾಯುದ್ಧದ ಸಮಯದಲ್ಲಿ ಅಕ್ಕಿ ಕೊರತೆಯಿರುವಾಗ ಅವಶ್ಯಕತೆಯಿಂದ ಹುಟ್ಟಿಕೊಂಡಿತು. ಅಂದಿನಿಂದ ರವಾ ಇಡ್ಲಿ ಯು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಮತ್ತು ಪ್ರಪಂಚದ ಕೆಲವು ಭಾಗಗಳಲ್ಲಿ ಜನಪ್ರಿಯ ಉಪಹಾರವಾಗಿ ಆಯ್ಕೆಯಾಗಿದೆ.
rava idliಯನ್ನು ಮನೆಯಲ್ಲಿಯೇ ಬಹಳ ಸುಲಭವಾಗಿ ತಯಾರಿಸಬಹುದು. ಈ ರುಚಿಕರವಾದ ಇಡ್ಲಿ ಯ ಪ್ರಮುಖ ಪದಾರ್ಥಗಳೆಂದರೆ – ರವೆ, ಮೊಸರು,ಅಡಿಗೆ ಸೋಡಾ ಅಥವಾ eno, ಸಾಸಿವೆ , ಕರಿಬೇವು, ತುರಿದ ಕ್ಯಾರೆಟ್,ಗೋಡಂಬಿ, ಕೊತ್ತಂಬರಿ ಸೊಪ್ಪು ಮತ್ತು ಪರಿಮಳಕ್ಕಾಗಿ ಒಂದು ಚಿಟಿಕೆ ಇಂಗು.

Read More :https://kannadanewsworld.com/%e0%b2%b9%e0%b2%be%e0%b2%97%e0%b2%b2%e0%b2%95%e0%b2%be%e0%b2%af%e0%b2%bf-%e0%b2%aa%e0%b2%b2%e0%b3%8d%e0%b2%af-karela-ki-sabji/

ರವಾ ಇಡ್ಲಿಯ ಪೌಷ್ಟಿಕಾಂಶದ ಪ್ರಯೋಜನಗಳು:-

  1. ಟೇಸ್ಟಿ ಟ್ರೀಟ್ ಆಗುವುದರ ಹೊರತಾಗಿ,ರವಾ ಇಡ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತದೆ.
  2. ರವೆ ಕಾರ್ಬೋಹೈಡ್ರೇಟ್ ಗಳ ಅತ್ಯುತ್ತಮ ಮೂಲವಾಗಿದೆ ಮತ್ತು ನಿರಂತರ ಶಕ್ತಿಯನ್ನು ಒದಗಿಸುತ್ತದೆ.
  3. ಇದು ಫೈಬರ್ ನ ಉತ್ತಮ ಮೂಲವಾಗಿದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಇದು ಸಹಾಯಮಾಡುತ್ತದೆ.
  4. ಮೊಸರು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
  5. ಕ್ಯಾರೆಟ್ ನಂತಹ ತರಕಾರಿಗಳನ್ನು ಸೇರಿಸುವುದರಿಂದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಮೂಲಕ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ.
  6. ರವಾ ಇಡ್ಲಿಯು ಸಮತೋಲಿತ ಉಪಹಾರವಾಗಿದ್ದು ನಿಮ್ಮನ್ನು ತೃಪ್ತಿ ಹಾಗೂ ಚೈತನ್ಯದಿಂದ ಇಡುತ್ತದೆ.

ತೆಂಗಿನಕಾಯಿ ಚಟ್ನಿ, ಪುದೀನ ಚಟ್ನಿ ಮತ್ತು ಟೊಮ್ಯಾಟೊ ಚಟ್ನಿಗಳಂತಹ ಚಟ್ನಿಯೊಂದಿಗೆ ರವಾ ಇಡ್ಲಿಯನ್ನು ಬಿಸಿಯಾಗಿ ಬಡಿಸಲಾಗುತ್ತದೆ. ಇನ್ನೂ ಹೆಚ್ಚಿನ ರುಚಿಗಾಗಿ ಸಾಂಬಾರ್, ಕೂರ್ಮ ಅಥವಾ ಸಾಗುವಿನೊಂದಿಗೆ ಸವಿಯಬಹುದು.ರವೆ ಇಡ್ಲಿ ಸಾಂಪ್ರದಾಯಿಕ ದಕ್ಷಿಣ ಭಾರತದ ಪಾಕಪದ್ಧತಿಗೆ ಸಂತೋಷಕರವಾದ ತಿರುವು.

ರವೆ ಇಡ್ಲಿ ಮಾಡಲು ಬೇಕಾದ ಸಾಮಗ್ರಿಗಳು

 ಇಂತಿವೆ:

  1. ರವೆ            –   1 ಕಪ್
  2. ಸಾಸಿವೆ       –   1 ಚಮಚ
  3. ಕಡಲೆಬೇಳೆ –  1 ಚಮಚ
  4. ಉದ್ದಿನಬೇಳೆ – 1 ಚಮಚ
  5. ಎಣ್ಣೆ            –  2 ರಿಂದ 3 ಚಮಚ
  6. ಕರಿಬೇವಿನ ಎಲೆ – ಸ್ವಲ್ಪ
  7. ಹಿಂಗು            –  ಚಿಟಿಕೆ
  8. ಮೆಣಸಿನಕಾಯಿ -1
  9. ಶುಂಠಿ               – 1 ಇಂಚು
  10. ಅರಶಿನ ಹುಡಿ  – 1/4 ಚಮಚ
  11. ಗೋಡಂಬಿ(optional)
  12. ಅಡುಗೆ ಸೋಡಾ – 1/4 ಚಮಚ
  13. ಉಪ್ಪು                – ರುಚಿಗೆ ತಕ್ಕಷ್ಟು
  14. ಮೊಸರು            – 1 ಕಪ್
  15. ನೀರು                  -1 ಕಪ್
  16. ಕೊತ್ತಂಬರಿ ಸೊಪ್ಪು – ಸ್ವಲ್ಪ

Rava Idli ಮಾಡುವ ವಿಧಾನ:

  • ಮೊದಲಿಗೆ ಬಾಣಲೆಯನ್ನು ಬಿಸಿ ಮಾಡಿ.ಬಾಣಲೆ ಬಿಸಿಯಾದ ನಂತರ ರವೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ತೆಗೆದಿಟ್ಟುಕೊಳ್ಳಿ.
  • ನಂತರ ಅದೇ ಬಾಣಲೆಗೆ 2 ಚಮಚದಷ್ಟು ಎಣ್ಣೆ ಸೇರಿಸಿ, ಎಣ್ಣೆ ಬಿಸಿಯಾದ ನಂತರ ಅದಕ್ಕೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ,ಕರಿಬೇವಿನ ಎಲೆ ಹಾಕಿ ಹುರಿಯಿರಿ. ಕಾಯಿಮೆಣಸು ಹಾಗೂ ಶುಂಠಿಯನ್ನು ಸೇರಿಸಿಕೊಳ್ಳಿ. ಈಗ ಇದಕ್ಕೆ ಹುರಿದ ರವೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಒಲೆಯನ್ನು ಆರಿಸಿ ತಣ್ಣಗಾಗಲು ಬಿಡಿ.
  • ತಣ್ಣಗಾದ ಬಳಿಕ ಅದಕ್ಕೆ ಒಂದು ಕಪ್ ಮೊಸರನ್ನು ಸೇರಿಸಿ. ಯಾವ ಕಪ್ ನಲ್ಲಿ ಮೊಸರನ್ನು ಸೇರಿಸಿದ್ದೀರೋ ಅದೇ ಕಪ್ ನಲ್ಲಿ ಒಂದು ಕಪ್ ನಷ್ಟು ನೀರನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.ಕೊತ್ತಂಬರಿಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ,  15 ನಿಮಿಷಗಳ ಕಾಲ ನೆನೆಸಿಡಿ.
  • 15 ನಿಮಿಷಗಳ ಬಳಿಕ ಅಡುಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ .ನಂತರ ಈ ಮಿಶ್ರಣವನ್ನು ಇಡ್ಲಿ ಮಾಡುವ ತಟ್ಟೆಗೆ ಸುರಿಯಿರಿ.ಈ ತಟ್ಟೆಯನ್ನು ಸ್ಟೀಮರ್ ನಲ್ಲಿ ಇಡಿ. ಎಲ್ಲಾ ತಟ್ಟೆಗಳನ್ನು ಇಟ್ಟ ಬಳಿಕ ಮುಚ್ಚಿಟ್ಟು 10ರಿಂದ 12 ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.
  • ಈಗ ಬಹಳ ಮೃದುವಾದ ದಿಢೀರನೆ ಮಾಡಬಹುದಾದ ರವೆ ಇಡ್ಲಿ ಸವಿಯಲು ಸಿದ್ಧ.
  • ಈ ಇಡ್ಲಿಯನ್ನು ಚಟ್ನಿ, ಸಾಂಬಾರ್ ಅಥವಾ ಸಾಗುವಿನೊಂದಿಗೆ ಬಡಿಸಿ.

ಟಿಪ್ಪಣಿಗಳು:

  • ಮೊದಲನೆಯದಾಗಿ ರವಾ ಇಡ್ಲಿ ಗೆ ಅಡುಗೆ ಸೋಡ ಅಥವಾ eno ದ ಬದಲು ಕೇವಲ ಹುಳಿ ಮೊಸರನ್ನು ಬಳಸಬಹುದು.ಇದು ಆರೋಗ್ಯಕರ ಆಯ್ಕೆಯೂ ಆಗಿರುತ್ತದೆ.
  • rava idliಗೆ ಸಣ್ಣ(ತೆಳ್ಳಗಿನ) ರವೆ ಬಳಸುವುದು ಉತ್ತಮ.ಇದನ್ನು ಬೊಂಬಾಯಿ ರವೆ ಎಂದೂ ಕರೆಯಲಾಗುತ್ತದೆ.
  • ಕೊನೆಯದಾಗಿ ರವಾ ಇಡ್ಲಿಗೆ ಖಾರಕ್ಕೆ ತಕ್ಕಂತೆ ಕಾಯಿಮೆಣಸನ್ನು ಹೊಂದಿಸಬಹುದು.ಸಣ್ಣ ಮಕ್ಕಳಿಗೆ ಕಾಯಿಮೆಣಸನ್ನುಸೇರಿಸದಿರುವುದು ಒಳ್ಳೆಯದು. ಮಕ್ಕಳಿಗೆ ಅವರ ಇಷ್ಟದ ಆಕಾರ ಮಾಡಿ ಸರ್ವ್ ಮಾಡಬಹುದು. ಇಷ್ಟ ಪಟ್ಟು ಖುಷಿಯಿಂದ ತಿನ್ನುತ್ತಾರೆ.

 

 

Leave a Comment

close
Thanks !

Thanks for sharing this, you are awesome !