puliyogare gojju recipe

ಪುಳಿಯೊಗರೆ ಗೊಜ್ಜು ಒಂದು ಸುವಾಸನೆಯ ಸಾಸ್ ಆಗಿದ್ದು ಭಾರತದ ಪಾಕ ಪದ್ಧತಿಯಲ್ಲಿ ಬಳಸಲಾಗುತ್ತದೆ. ವಿಶೇಷವಾಗಿ ಈ ಗೊಜ್ಜನ್ನು ಪುಳಿಯೊಗರೆ ಅಥವಾ ಹುಣಸೆ ರೈಸ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ರುಚಿಕರವಾದ ಗೊಜ್ಜನ್ನು ಹುಣಸೆ ಹಣ್ಣಿನ ತಿರುಳಿನ ಸಮೃದ್ಧ ಮಿಶ್ರಣದಿಂದ ತಯಾರಿಸಲಾಗುತ್ತದೆ. ಬೆಲ್ಲ, ಮಸಾಲೆಗಳು, ಸಾಸಿವೆ, ಕರಿಬೇವಿನ ಎಲೆಗಳು ಮತ್ತು ಒಣಗಿದ ಕೆಂಪು ಮೆಣಸಿನ ತಡ್ಕಾ ಇದರಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಹುಣಸೆ ಹಣ್ಣು,ಹುಳಿ ಮತ್ತು ಕಟುವಾದ ಬೇಸ್ ಅನ್ನು ಒದಗಿಸುತ್ತದೆ. ಆದರೆ ಬೆಲ್ಲವು ಸುವಾಸನೆಗಳನ್ನು ಸಮತೋಲನಗೊಳಿಸುವಲ್ಲಿ ಸಹಾಯಕವಾಗುತ್ತದೆ.ಕೊತ್ತಂಬರಿ,ಜೀರಿಗೆ, ಮೆಂತ್ಯ ಮತ್ತು ಅರಶಿನದಂತಹ ಪರಿಮಳಯುಕ್ತ ಮಸಾಲೆಗಳು ಗೊಜ್ಜಿಗೆ ಆಹ್ಲಾದಕರ ಪರಿಮಳವನ್ನು ತುಂಬುತ್ತವೆ. puliyogare gojju recipe ಯಿಂದ ಗೊಜ್ಜನ್ನು ಮುಂಚಿತವಾಗಿ ತಯಾರಿಸಬಹುದು ಮತ್ತು ನಂತರದ ಬಳಕೆಗಾಗಿ ಸಂಗ್ರಹಿಸಿಡಬಹುದು.

puliyogare gojju recipe
puliyogare gojju recipe

 

ಒಮ್ಮೆ ಈ ಗೊಜ್ಜನ್ನು ತಯಾರಿಸಿದರೆ ಅನ್ನದೊಂದಿಗೆ ಬೆರೆಸಿ ಪುಳಿಯೊಗರೆಯಾಗಿ ಸೇವಿಸಬಹುದು. ಕರ್ನಾಟಕದಲ್ಲಿ ಈ ಪುಳಿಯೊಗರೆ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಪ್ರತಿಯೊಬ್ಬ ಮನೆಮಂದಿಗೂ ಪುಳಿಯೊಗರೆ ರೆಸಿಪಿ ಗೊತ್ತಿದೆ ಎಂದರೆ ತಪ್ಪಾಗಲಾರದು. ಹಾಗಾದರೆ ರುಚಿಯಾದ ಪುಳಿಯೊಗರೆ ಮಾಡಲು ಗೊಜ್ಜನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ ಬನ್ನಿ.

puliyogare gojju recipeಗೆ ಬೇಕಾಗುವ ಸಾಮಗ್ರಿಗಳು:

  • ಹುಣಸೆ ಹಣ್ಣು – ಒಂದು ಕಪ್
  • ಬೆಲ್ಲ ( ಬೆಲ್ಲದ ಹುಡಿ) – ಒಂದು ಕಪ್
  • ಕಲ್ಲುಪ್ಪು
  • ಅರಶಿನ ಹುಡಿ
  • ಕಡಲೆಬೇಳೆ – 1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಕೊತ್ತಂಬರಿ ಬೀಜ -1 ½ ಚಮಚ
  • ಜೀರಿಗೆ -½ ಚಮಚ
  • ಕರಿಮೆಣಸು – ½ ಚಮಚ
  • ಮೆಂತ್ಯ – ¼ ಚಮಚ
  • ಉದ್ದ ಮೆಣಸು – 5 ರಿಂದ 6

puliyogare gojju recipe ಮಾಡುವ ವಿಧಾನ ಹೀಗಿದೆ:

  • ಹುಣಸೆ  ಹಣ್ಣನ್ನು 8 ಗಂಟೆಗಳ ಕಾಲ ರಾತ್ರಿಯಿಡೀ ನೆನೆಸಿಡಿ.ಚೆನ್ನಾಗಿ ರಸ ಬಿಟ್ಟು ಕೊಡುತ್ತದೆ. ತಕ್ಷಣ ಬೇಕೆಂದಲ್ಲಿ ಬಿಸಿ ನೀರಿನಲ್ಲಿ 1 ಗಂಟೆಗಳ ಕಾಲ ನೆನೆಸಿಡಿ.
  • ಬಳಿಕ ಆ ನೀರನ್ನು ಸೋಸಿಕೊಳ್ಳಿ. ನೀರನ್ನು ಸೇರಿಸಿಕೊಂಡು ತೆಳ್ಳಗೆ ಮಾಡಿಕೊಳ್ಳಿ.
  • ಬಾಣಲೆಯನ್ನು ಒಲೆಯಲ್ಲಿಟ್ಟು ಸೋಸಿದ ಹುಣಸೆ ನೀರನ್ನು ಸೇರಿಸಿ.
  • ಎಷ್ಟು ಹುಣಸೆಹಣ್ಣು ಸೇರಿಸಿದ್ದೀರೋ ಅಷ್ಟೇ ಪ್ರಮಾಣದಲ್ಲಿ ಬೆಲ್ಲದ ಹುಡಿ ಸೇರಿಸಿ.
  • ಕಲ್ಲುಪ್ಪು ಸೇರಿಸಿ
  • ಅರಶಿನ ಹುಡಿ ಸೇರಿಸಿ
  • ಜಾಸ್ತಿ ಉರಿಯಲ್ಲಿಟ್ಟು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಸಿ.
  • ಕುದಿ ಬಂದ ನಂತರ ಮಧ್ಯಮ ಉರಿಯಲ್ಲಿ ಕುದಿಸಿ.ಅದು ಗಟ್ಟಿಯಾಗುತ್ತಾ ಹೋಗುತ್ತದೆ.ಸುಮಾರು 20 ನಿಮಿಷಗಳ ಕಾಲ ಕುದಿಸಿ.

 

ಈಗ ಹುಡಿಯನ್ನು ತಯಾರಿಸುವ ವಿಧಾನವನ್ನು ನೋಡೋಣ:

  • ಮೊದಲಿಗೆ ಕಡ್ಲೆಬೇಳೆ ಉದ್ದಿನ ಬೇಳೆಯನ್ನು ಕಡಿಮೆ ಉರಿಯಲ್ಲಿ ಹುರಿದಿಟ್ಟುಕೊಳ್ಳಿ.
  • ಅದೇ ಬಾಣಲೆಗೆ ಕೊತ್ತಂಬರಿ,ಜೀರಿಗೆ,ಕರಿಮೆಣಸು, ಮೆಂತ್ಯ ಸೇರಿಸಿ ಕಡಿಮೆ ಉರಿಯಲ್ಲಿ ಘಮ ಘಮ ಸುವಾಸನೆ ಬರುವವರೆಗೆ ಹುರಿಯಿರಿ.
  • ಸುವಾಸನೆ ಬರುವಾಗ 5ರಿಂದ 7 ಉದ್ದಮೆಣಸು(ಬ್ಯಾಡಗಿ ಮೆಣಸು) ಕಟ್ ಮಾಡಿ ಸೇರಿಸಿಕೊಳ್ಳಿ. ಮೆಣಸಿನ ಬಣ್ಣ ಬದಲಾದ ನಂತರ ಒಲೆಯನ್ನು ಆರಿಸಿ ಮಿಕ್ಸರ್ jar ge ಹಾಕಿ ಹುಡಿಮಾಡಿಟ್ಟುಕೊಳ್ಳಿ.
  • ಮಾಡಿದ ಹುಡಿಯನ್ನು ಬದಿಗಿಡಿ.
  • ಅದೇ ಪ್ಯಾನ್ ನಲ್ಲಿ ½ ಕಪ್ ನಷ್ಟು ಕಪ್ಪು ಎಳ್ಳನ್ನು ಹುರಿದುಕೊಳ್ಳಿ.
  • ಆರಿದ ನಂತರ ಹುಡಿಮಾಡಿಟ್ಟುಕೊಳ್ಳಿ.
  • ½ ಕಪ್ ನಷ್ಟು ಕೊಬ್ಬರಿಯನ್ನು ಪ್ಯಾನ್ ಗೆ ಹಾಕಿ ಹುರಿಯಿರಿ.
  • ನಂತರ ಮಾಡಿಟ್ಟ ಹುಡಿಯನ್ನು ಸೇರಿಸಿಕೊಳ್ಳಿ.
  • ಮೊದಲು ಬೇಳೆ, ಕೊತ್ತಂಬರಿ ಬೀಜದ ಹುಡಿಯನ್ನು ಸೇರಿಸಿ.ಕಡಿಮೆ ಉರಿಯಲ್ಲಿರಲಿ .
  • ಈಗ 2 ಚಮಚದಷ್ಟು ಎಳ್ಳಿನ ಪುಡಿಯನ್ನು ಸೇರಿಸಿ.
  • ಕೊಬ್ಬರಿ ತುರಿಯನ್ನು ಸೇರಿಸಿದರೆ ಗೊಜ್ಜು ತಯಾರಾಗುತ್ತದೆ.
  • ಈಗ ಗೊಜ್ಜಿಗೆ ಒಗ್ಗರಣೆ ಕೊಡಲು ಬಾಣಲೆಗೆ 1ಕಪ್ ನಷ್ಟು ಎಳ್ಳೆಣ್ಣೆ ಹಾಕಿ.
  • ಎಣ್ಣೆ ಬಿಸಿಯಾದ ನಂತರ ಸಾಸಿವೆ ಹಾಕಿ ಸಿಡಿಸಿ.
  • ಈಗ ಕಡಲೆಬೇಳೆ,ಉದ್ದಿನಬೇಳೆ ಸೇರಿಸಿ ಹುರಿಯಿರಿ.
  • ಕಡಲೆಕಾಯಿ ಬೀಜವನ್ನು ಸೇರಿಸಿ.
  • 3 ರಿಂದ 4 ಕೆಂಪು ಮೆಣಸಿನ ಕಾಯಿ ಹಾಗೂ ಕರಿಬೇವಿನ ಎ ಕರಿಬೇವಿನ ಎಲೆಗಳನ್ನು ಸೇರಿಸಿ.
  • ¼ ಚಮಚ ಹಿಂಗು ಸೇರಿಸಿ ಮಿಕ್ಸ್ ಮಾಡಿ.
  • ಈಗ ಈ ಒಗ್ಗರಣೆಯನ್ನು ತಯಾರಿಸಿದ ಗೊಜ್ಜಿಗೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿದರೆ ಪುಳಿಯೊಗರೆ ಗೊಜ್ಜು ರೆಡಿ.

 

ಸಲಹೆಗಳು:

  • puliyogare gojju recipe ಯಲ್ಲಿ ಕೆಂಪು ಹುಣಸೆ ಹಣ್ಣಿಗಿಂತ ಕಪ್ಪು ಹುಣಸೆ ಹಣ್ಣನ್ನು ಬಳಸುವುದು ಉತ್ತಮ.ಕಪ್ಪು ಹುಣಸೆ ಹಣ್ಣಿನಲ್ಲಿ  ಬಣ್ಣ ಚೆನ್ನಾಗಿ ಬರುತ್ತದೆ.
  • ಈ ಗೊಜ್ಜನ್ನು ಫ್ರಿಡ್ಜ್ ನಲ್ಲಿ ಎಷ್ಟು ದಿನಗಳವರೆಗೂ ಇಡಬಹುದು. ಆದರೆ ಹೊರಗಡೆ (ಕೋಣೆಯ ತಾಪಮಾನದಲ್ಲಿ) 10-15 ದಿನಗಳ ವರೆಗೆ ಮಾತ್ರ ಇಡಬಹುದು. ಯಾಕೆಂದರೆ ಎಳ್ಳಿನ ಪುಡಿ ಮತ್ತು ಕೊಬ್ಬರಿಯನ್ನು ಸೇರಿಸಿರುವುದರಿಂದ ಅದು ಬೇಗನೆ ಹಾಳಾಗುತ್ತದೆ.

 

close
Thanks !

Thanks for sharing this, you are awesome !