Poha Recipe in Kannada – ಪೋಹಾ ಮಾಡೋದು ಹೇಗೆ?

ಪೋಹಾ ಒಂದು ಜನಪ್ರಿಯ ಭಾರತೀಯ ಸಾಂಪ್ರದಾಯಿಕ ಉಪಹಾರವಾಗಿದೆ. ಇದು ಭಾರತದ ಹಲವು ರಾಜ್ಯಗಳಲ್ಲಿ ಬೆಳಗ್ಗಿನ ಉಪಹಾರವಾಗಿದೆ. ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ಗುಜರಾತಿನಲ್ಲಿ ಇದನ್ನು ಚಹಾ ಅಥವಾ ಕಾಫಿಯೊಂದಿಗೆ ಬೆಳಗ್ಗಿನ ಉಪಹಾರವಾಗಿ ಸವಿಯುತ್ತಾರೆ.ಪೋಹಾವನ್ನು ಬಹಳ ಬೇಗನೆ ತಯಾರಿಸಬಹುದು. ಬಿಡುವಿಲ್ಲದ ಕೆಲಸದ ನಡುವೆ ಧಿಡೀರನೆ ಮಾಡಬಹುದಾದ Poha Recipe ಇದು.ದಪ್ಪ ಅವಲಕ್ಕಿಯಿಂದ ಮಾಡಬಹುದಾದ ಈ ತಿಂಡಿ ಆರೋಗ್ಯಕರ ಹಾಗೂ ಬಹಳ ರುಚಿಕರವಾಗಿರುತ್ತದೆ.ಚಪ್ಪಟೆಯಾದ ಅಕ್ಕಿ ಕಾಳನ್ನು beaten rice ಅಥವಾ ಪೋಹಾ ಎನ್ನುತ್ತಾರೆ.

 

 Poha Recipe in Kannada
Poha Recipe in Kannada

ಪೋಹಾವನ್ನು ಹೇಗೆ ಮಾಡೋದು ಎಂದು ತಿಳಿಯೋಣ ಬನ್ನಿ.

Read More :https://kannadanewsworld.com/sweet-corn-recipe/


ಪೋಹಾ ಮಾಡಲು ಬೇಕಾಗಿರುವ ಪದಾರ್ಥಗಳು ಇಂತಿವೆ: Poha Recipe in Kannada

●1ಕಪ್ ಪೋಹಾ(ದಪ್ಪ ಅವಲಕ್ಕಿ)

●2ಈರುಳ್ಳಿ ( ಸಣ್ಣದಾಗಿ ಹೆಚ್ಚಿದ)

●1-2 ಹಸಿರು ಮೆಣಸಿನಕಾಯಿ (ಖಾರಕ್ಕೆ ತಕ್ಕಂತೆ ಸಣ್ಣದಾಗಿ ಹೆಚ್ಚಿದ)

●½ ಚಮಚ ಸಾಸಿವೆ

●½ ಚಮಚ ಜೀರಿಗೆ

●¼ ಚಮಚ ಅರಿಶಿಣ ಹುಡಿ

●ಒಂದು ಚಿಟಿಕೆ ಹಿಂಗು

●8-10 ಕರಿಬೇವಿನ ಎಲೆಗಳು

●¼ ಕಪ್ ಹುರಿದ ಕಡಲೆಕಾಯಿ

●2 ಚಮಚ ಎಣ್ಣೆ

●ರುಚಿಗೆ ತಕ್ಕಂತೆ ಉಪ್ಪು

●ನಿಂಬೆರಸ

●ತಾಜಾ ಕೊತ್ತಂರಿಸೊಪ್ಪು(ಸಣ್ಣದಾಗಿ ಹೆಚ್ಚಿದ)

ಬಟಾಣಿ, ಕ್ಯಾರೆಟ್, ಟೊಮೆಟೊ, ಗೋಡಂಬಿ,ಒಣದ್ರಾಕ್ಷಿ, ಮತ್ತು ತೆಂಗಿನಕಾಯಿ ಇವು ಸೇರಿಸಬಹುದಾದ ಅಥವಾ ಬದಲಿಸಬಹುದಾದ ಪದಾರ್ಥಗಳು.

 

ಪೋಹಾವನ್ನು ಮಾಡುವ ವಿಧಾನ ಹೀಗಿದೆ: Poha Recipe in Kannada

●ಮೊದಲಿಗೆ ಕೆಲವು ಸೆಕೆಂಡುಗಳ ಕಾಲ ಅಕ್ಕಿಯನ್ನು ತೊಳೆದುಕೊಳ್ಳುವ ರೀತಿಯಲ್ಲಿ ಪೋಹಾವನ್ನು ತೊಳೆದುಕೊಂಡು 10 ನಿಮಿಷಗಳ ಕಾಲ ಪೋಹಾವನ್ನು ನೀರಿನಲ್ಲಿ ನೆನೆಸಿಡಿ. ತದನಂತರ ಪೋಹಾದಿಂದ ಸಂಪೂರ್ಣವಾಗಿ ನೀರು ಹೋಗುವಂತೆ ಅದನ್ನು ಬಸಿಯಿರಿ.

●ನಂತರ ಮಧ್ಯಮ ಶಾಖದ ಉರಿಯಲ್ಲಿ ಬಾಣಲೆಯನ್ನಿಡಿ. ಬಾಣಲೆ ಬಿಸಿಯಾದ ನಂತರ 2ರಿಂದ 3 ಚಮಚ ಎಣ್ಣೆಯನ್ನು ಬಿಸಿ ಮಾಡಿ.

●ಎಣ್ಣೆ ಬಿಸಿಯಾದ ನಂತರ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ.

●ನಂತರ ಹೆಚ್ಚಿದ ಈರುಳ್ಳಿಯನ್ನು ಹಾಕಿ ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ.

●ನಂತರ ಮೆಣಸಿನಕಾಯಿ ಸೇರಿಸಿ ಸ್ವಲ್ಪ ಸೆಕೆಂಡುಗಳ ಕಾಲ ಹುರಿದು ಮೊದಲೇ ಹುರಿದಿಟ್ಟ ನೆಲಕಡಲೆಯನ್ನು ಸೇರಿಸಿ. ಈ ಹಂತದಲ್ಲಿ ಕ್ಯಾರೆಟ್,ಬಟಾಟೆ, ಕ್ಯಾಪ್ಸಿಕಂನಂತಹ ತರಕಾರಿಗಳನ್ನು ಸೇರಿಸಿಕೊಳ್ಳಬಹುದು.

●ನಂತರ ಬಾಣಲೆಗೆ ಅರಶಿನ ಪುಡಿ,ಉಪ್ಪು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

●ಈಗ ಈ ಮಿಶ್ರಣಕ್ಕೆ ಬಸಿದಿಟ್ಟಿರುವ ದಪ್ಪ ಅವಲಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮಿಶ್ರಣ ಬಿಸಿಯಾಗುವವರೆಗೆ ಇನ್ನೊಂದು 3-4 ನಿಮಿಷ ಬೇಯಿಸಿಕೊಳ್ಳಿ.

●ಬೆಂಕಿಯನ್ನು ಆಫ್ ಮಾಡಿ ಮತ್ತು ರುಚಿಗೆ ತಕ್ಕಂತೆ ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ.

●ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಹಾಗೂ ಬಿಸಿ ಬಿಸಿಯಾಗಿ ಬಡಿಸಿ ಸವಿಯಿರಿ.

 

 

Leave a Comment

close
Thanks !

Thanks for sharing this, you are awesome !