ಜ.10 ರಿಂದ ಸಿಇಟಿ ಗೆ ಅರ್ಜಿ ಸಲ್ಲಿಕೆ ಆರಂಭ! Karnataka cet application form 2023-2024

ಬೆಂಗಳೂರು : ಈ ಬಾರಿ ಜ.10 ಅಥವಾ 12ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಅರ್ಜಿ ಸಲ್ಲಿಸುವಿಕೆಯಲ್ಲಿ ಏನೂ ಲೋಪದೋಷಗಳು ಬರಬಾರದೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪ್ರಕ್ರಿಯೆಯಲ್ಲಿ ಸರಿಯಾದ ಮಾಹಿತಿ ಇರುವ ಅರ್ಜಿಗಳು ಮಾತ್ರ ಆನ್ ಲೈನ್‌ ನಲ್ಲಿ ಸಲ್ಲಿಕೆಯಾಗುವ ವ್ಯವಸ್ಥೆಯನ್ನು ಈ ಬಾರಿ ಅಳವಡಿಸುತ್ತಿದೆ.Karnataka cet application form 2023-2024

Karnataka cet application form 2023-2024
ಜ.10 ರಿಂದ ಸಿಇಟಿ ಗೆ ಅರ್ಜಿ ಸಲ್ಲಿಕೆ ಆರಂಭ!

Read More

ಅಭ್ಯರ್ಥಿಯ ಸಂಪೂರ್ಣ ಹೆಸರು, ತಂದೆ, ತಾಯಿ ಹೆಸರಿನ ಅಕ್ಷರಗಳಲ್ಲಿ ಆಗುವ ತಪ್ಪು , ಪ್ರವರ್ಗ/ಜಾತಿ ಮಾಹಿತಿ ತಪ್ಪುಗಳಿಂದ ಸಿಇಟಿ ಯ ಕೌನ್ಸೆಲಿಂಗ್‌ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆನ್ ಲೈನ್‌ ಅರ್ಜಿ ತುಂಬುವಾಗ ಮಾಹಿತಿ ಲೋಪ ಕಂಡುಬಂದರೆ ಪ್ರಕ್ರಿಯೆ ಮುಂದಿನ ಹಂತಕ್ಕೆ ಹೋಗದಂತೆ ಸಾಪ್ಟ್ ವೇರ್‌ ವಿನ್ಯಾಸಗೊಳಿಸಲಾಗಿದೆ.

ಜತೆಗೆ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆಯಿಂದ ಸಿಇಟಿ ಸಾಪ್ಟ್‌ ವೇರ್‌ ನೇರವಾಗಿ ದಾಖಲೆ,ಮಾಹಿತಿಯನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಸಿಬಿಎಸ್‌ ಇ ಮತ್ತು ಐಸಿಎಸ್‌ ಇಯಿಂದಲೂ ನೇರ ಮಾಹಿತಿ ಸಿಇಟಿ ಸಾಪ್ಟ್‌ ವೇರ್‌ ಸೇರಲಿದೆ.ಇದನ್ನು ಆಧರಿಸಿ ಕೆಇಎಯ ಸಾಪ್ಟ್‌ ವೇರ್‌ ಅಭ್ಯರ್ಥಿಗಳ ಮಾಹಿತಿಯನ್ನು ಪರಿಷ್ಕರಿಸಲಿದೆ.

Leave a Comment

close
Thanks !

Thanks for sharing this, you are awesome !