coconut chutney recipe – ತೆಂಗಿನಕಾಯಿ ಚಟ್ನಿ| ಕಾಯಿ ಚಟ್ನಿರೆಸಿಪಿ

coconut chutney recipe – ತೆಂಗಿನಕಾಯಿ ಚಟ್ನಿ| ಕಾಯಿ ಚಟ್ನಿರೆಸಿಪಿ ಭಾರತೀಯ ಪಾಕಪದ್ದತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಬಹುಮುಖ್ಯ ಮತ್ತು ರುಚಿಕರವಾದ ಪಲ್ಯವಾಗಿದೆ. ತೆಂಗಿನಕಾಯಿಯ ಸುವಾಸನೆಯುಳ್ಳ ಈ ಚಟ್ನಿ ದೋಸೆ ಹಾಗೂ ಇಡ್ಲಿಯೊಂದಿಗೆ ಚೆನ್ನಾಗಿ ಹೊಂದುತ್ತದೆ.ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ತೆಂಗಿನಕಾಯಿಯ ಬಳಕೆ ಬಹಳ ಹೆಚ್ಚು.ಕೆಲವೊಂದು ಕಡೆಗಳಲ್ಲಿ ಈ ಚಟ್ನಿಯನ್ನು ಅನ್ನದೊಂದಿಗೂ ಸವಿಯುತ್ತಾರೆ.

coconut chutney recipe
coconut chutney recipe – ತೆಂಗಿನಕಾಯಿ ಚಟ್ನಿ| ಕಾಯಿ ಚಟ್ನಿರೆಸಿಪಿ

 

Read More :

ಇಂತಹ ಜನಪ್ರಿಯ ತೆಂಗಿನಕಾಯಿಯ ಚಟ್ನಿಯನ್ನು ಹೇಗೆ ಮಾಡೋದು ಎಂದು ಈಗ ತಿಳಿಯೋಣ.

coconut chutney recipe – ತೆಂಗಿನಕಾಯಿ ಚಟ್ನಿ| ಕಾಯಿ ಚಟ್ನಿರೆಸಿಪಿ ಗೆ ಬೇಕಾದ ಸಾಮಗ್ರಿಗಳು ಇಂತಿವೆ:

  • 1ಕಪ್ ತುರಿದ ತೆಂಗಿನಕಾಯಿ
  • 2-3 ಹಸಿಮೆಣಸಿನಕಾಯಿ
  • 1/4ಕಪ್ ಹುರಿದ ಕಡಲೇಬೇಳೆ
  • ಸಿಪ್ಪೆ ಸುಲಿದ ಶುಂಠಿಯ ಸಣ್ಣ ತುಂಡು(ಸುಮಾರು 1/2ಇಂಚು)
  •  2-3 ಚಮಚ ತಾಜಾ ಕೊತ್ತಂಬರಿ ಎಲೆಗಳು (ಸಣ್ಣದಾಗಿ ಕತ್ತರಿಸಿದ)
  • 1 ಚಮಚ ನಿಂಬೆರಸ
  • ರುಚಿಗೆ ತಕ್ಕಷ್ಟು ಉಪ್ಪು

coconut chutney recipe – ತೆಂಗಿನಕಾಯಿ ಚಟ್ನಿ| ಕಾಯಿ ಚಟ್ನಿರೆಸಿಪಿ ಒಗ್ಗರಣೆಗೆ

  • 1 ಚಮಚ ಎಣ್ಣೆ (ತೆಂಗಿನಕಾಯಿ ಎಣ್ಣೆ)
  • ½ ಟೀ ಚಮಚ ಸಾಸಿವೆ
  • ½ ಟೀ ಚಮಚ ದ್ದಿನಬೇಳೆ
  • ಒಂದು ಚಿಟಿಕೆ ಹಿಂಗು
  • 2-3 ಒಣಗಿದ ಕೆಂಪು ಮೆಣಸಿನಕಾಯಿ
  • ಕರಿಬೇವಿನ ಎಲೆಗಳು (ಒಂದು ಚಿಗುರು)

 

ಮಾಡುವ ವಿಧಾನ ಹೀಗಿದೆ:

  • ಬ್ಲೆಂಡರ್ ನಲ್ಲಿ ತುರಿದ ತೆಂಗಿನಕಾಯಿ,ಕತ್ತರಿಸಿದ ಹಸಿರು ಮೆಣಸಿನಕಾಯಿ, ಹುರಿದ ಕಡಲೆಬೇಳೆ, ಶುಂಠಿ, ಕೊತ್ತಂರಿಸೊಪ್ಪು, ನಿಂಬೆರಸ ಮತ್ತು ಚಿಟಿಕೆ ಉಪ್ಪು ಸೇರಿಸಿ ಒರಟಾದ ಪೇಸ್ಟನ್ನು ಮಾಡಿಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಅದು ಹೆಚ್ಚು ಸೋರಿಕೆಯಾಗದಂತೆ ನೋಡಿಕೊಳ್ಳಬೇಕು.
  • ಚಟ್ನಿಯನ್ನು ಬೌಲ್ ಗೆ ಹಾಕಿ ಪಕ್ಕಕ್ಕೆ ಇರಿಸಿ
  • ಈಗ ಒಗ್ಗರಣೆಗೆ ಮಧ್ಯಮ ಉರಿಯಲ್ಲಿ ಬಾಣಲೆಯನ್ನಿಟ್ಟು ಎಣ್ಣೆ ಬಿಸಿಮಾಡಿ
  • ನಂತರ ಉದ್ದಿನಬೇಳೆ, ಇಂಗು, ಒಣಗಿದ ಕೆಂಪು ಮೆಣಸಿನಕಾಯಿಗಳು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ
  • ನಂತರ ಹುರಿದ ಕಡಲೆಬೇಳೆ ಹಾಗೂ ಹಸಿಮೆಣಿನಕಾಯಿಯನ್ನು ಸೇರಿಸಿ ಮೆಣಸಿನಕಾಯಿಗಳು ಸ್ವಲ್ಪ ಗರಿಗರಿಯಾಗುವವರೆಗೆ ಕರಿಯಿರಿ.
  • ನಂತರ ಈ ಒಗ್ಗರಣೆಯನ್ನು ಆಗಲೇ ಪಕ್ಕದಲ್ಲಿರಿಸಿದ ಚಟ್ನಿಗೆ ಎಚ್ಚರಿಕೆಯಿಂದ ಸುರಿಯಿರಿ.(ಬಳಸುವಾಗ ಚಟ್ನಿಯನ್ನು ಚೆನ್ನಾಗಿ ಮಿಶ್ರಮಾಡಿಕೊಳ್ಳಿ)
  • ಸುವಾಸನೆಯುಕ್ತ ತೆಂಗಿನಕಾಯಿ ಚಟ್ನಿ ಬಡಿಸಲು ಸಿದ್ಧವಾಗಿದೆ.

ಇದು ದೋಸೆ,ಇಡ್ಲಿ, ವಡಾ ಹಾಗೂ ಅನ್ನದೊಂದಿಗೆ ಸವಿಯಲು ಬಹಳ ರುಚಿಯಾಗಿರುತ್ತದೆ.

 

ಸಲಹೆಗಳು:

  • ಖಾರಕ್ಕನುಸಾರವಾಗಿ ಹಸಿಮೆಣಸಿನಕಾಯಿಯನ್ನು ಹಾಕಬಹುದು.
  • ಆದ್ಯತೆಗೆ ಅನುಗುಣವಾಗಿ ನೀರನ್ನು ಸೇರಿಸಿಕೊಳ್ಳಬೇಕು.
  • ಒಗ್ಗರಣೆಗೆ ಒಂದೆರಡು ಬೆಳ್ಳುಳ್ಳಿಯನ್ನು ಸೇರಿಸಬಹುದು.
  • ಹೊಸದಾಗಿ ತುರಿದ ತೆಂಗಿನಕಾಯಿ ಅತ್ಯುತ್ತಮ ಪರಿಮಳವನ್ನು ನೀಡುತ್ತದೆ.ಅದು ಲಭ್ಯವಿಲ್ಲದಿದ್ದರೆ ಫ್ರಿಡ್ಜ್ನಲ್ಲಿರಿಸಿದ ತೆಂಗಿನಕಾಯಿಯನ್ನು ಬಳಸಬಹುದು.ಬಳಸುವ ಮೊದಲು ತೆಂಗಿನಕಾಯಿ ಕೊನೆಯ ತಾಪಮಾನಕ್ಕೆ ಬಂದಿರಬೇಕು.

 

ತೆಂಗಿನಕಾಯಿ ಚಟ್ನಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತನ್ನ ಅಧ್ಭುತ ರುಚಿಯೊಂದಿಗೆ ಜನಪ್ರಿಯವಾಗಿದೆ. ಆರೋಗ್ಯಕರವಾದ ದಕ್ಷಿಣ ಭಾರತದ ಈ ರುಚಿಯನ್ನು ನಿಮ್ಮ ಅಡುಗೆ ಮನೆಯಲ್ಲೂ ಈಗ ತರಬಹುದು.

 

 

 

 

 

 

 

 

Leave a Comment

close
Thanks !

Thanks for sharing this, you are awesome !