ಹಾಗಲಕಾಯಿ ಪಲ್ಯ| Karela Ki Sabji ಅಂದ್ರೆ ಇಷ್ಟು ರುಚಿಯಾಗಿರುತ್ತಾ!

Karela Ki Sabji

ಹಾಗಲಕಾಯಿ ಎಂದು ಕರೆಯಲ್ಪಡುವ ಕರೇಲಾ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದ ಸಂಪತ್ತು ಎಂದರೆ ತಪ್ಪಾಗಲಾರದು. ಕರೇಲಾ ಅದರ ಕಹಿ ರುಚಿಯಿಂದಾಗಿ ಯಾರದೇ ನೆಚ್ಚಿನ ತರಕಾರಿಯಾಗಿ ರುವುದಿಲ್ಲ. ಆದರೆ ಸರಿಯಾಗಿ ತಯಾರಿಸಿದರೆ Karela Ki Sabji ನಿಮ್ಮ ಊಟಕ್ಕೆ ಸಂತೋಷಕರ ಮತ್ತು ಪಾಷ್ಟಿಕಾಂಶವನ್ನು ಒದಗಿಸುತ್ತದೆ.ಈ ಬ್ಲಾಗ್ ಲೇಖನದಲ್ಲಿ Karela Ki Sabji ಯ ಸುವಾಸನೆಯ ಪಾಕವಿಧಾನವನ್ನು ನಾವು ಮಾಡಲಿದ್ದೇವೆ.ಈ ಪಾಕವಿಧಾನವು ಕಹಿಯನ್ನು ಮರೆಮಾಚುವುದಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕರೇಲಾ ಎಂದರೆ ಹಾಗಲಕಾಯಿ.ಈ ಕಹಿ ತರಕಾರಿ ಯ ಪಲ್ಯ Karela Ki Sabji ಎಂದೇ ಪ್ರಸಿದ್ಧ.ಹಾಗಲಕಾಯಿ ಯನ್ನು ಸುಲಭವಾಗಿ ಮನೆಯಲ್ಲಿಯೇ ಬೆಳೆಸಬಹುದು.ಬಳ್ಳಿಯಲ್ಲಿ ಬೆಳೆಯುವ ಹಾಗಲಕಾಯಿ ಮೈ ಎಲ್ಲಾ ಒರಟು, ಅಂತೆಯೇ ಕಹಿಯೂ ಆಗಿರುತ್ತದೆ.ರುಚಿಯಲ್ಲಿ ಕಹಿಯಾಗಿದ್ದರೂ ಇದರಿಂದ ಆರೋಗ್ಯಕ್ಕೆ ಪ್ರಯೋಜನ ಹಲವಾರು.ಸಾಕಷ್ಟು ಜೀವಸತ್ವಗಳು, ಫೈಬರ್ ,ಖನಿಜಗಳಿಂದ ಕೂಡಿದೆ ಈ ಹಾಗಲಕಾಯಿ.ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತರಿಸುತ್ತದೆ. ಹಾಗೂ ಜೀರ್ಣ ಕ್ರಿಯೆಗೂ ಇದು ಸಹಾಯ ಮಾಡುತ್ತದೆ.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗಲಕಾಯಿಯ ಪಾತ್ರ ಅಪಾರವಾದುದು.

ಕರೇಲಾವನ್ನು ಮನೆಯಲ್ಲಿಯೇ ಸುಲಭವಾಗಿ ಬೆಳೆಸಬಹುದು.ಮಾರುಕಟ್ಟೆಯಿಂದ ಕರೇಲಾವನ್ನು ಖರೀದಿಸುವಾಗ ತಾಜಾ ಕರೇಲಾವನ್ನು ಖರೀದಿಸುವುದು ಉತ್ತಮ.ಇದರ ಕಹಿಯನ್ನು ಕಡಿಮೆ ಮಾಡಲು ಹಲವಾರು ವಿಧಾನಗಳನ್ನು ಬಳಸಬಹುದು.ನಾನು ಸಾಮಾನ್ಯವಾಗಿ ಬಳಸುವ ವಿಧಾನ ಯಾವುದೆಂದರೆ ಹಾಗಲಕಾಯಿಯನ್ನು ತೊಳೆದು ಕತ್ತರಿಸಿದ ಬಳಿಕ ಕೆಲವು ಹೊತ್ತುಗಳ ಕಾಲ ಉಪ್ಪಿನೊಂದಿಗೆ ಬೆರೆಸಿಡುವುದು.
ಈ ಲೇಖನದ ಮೂಲಕ ಹಂತ ಹಂತವಾಗಿ Karela Ki Sabji ರೆಸಿಪಿಯನ್ನು ನೊಡಲಿದ್ದೀರಿ.
ಸರಿ ಹಾಗಿದ್ರೆ Karela Ki Sabji ಹೇಗೆ ಮಾಡುವುದೆಂದು ತಿಳಿಯೋಣ ಬನ್ನಿ:

Karela Ki Sabji ಬೇಕಾಗುವ ಪದಾರ್ಥಗಳು:
•ತಾಜಾ ಹಾಗಲಕಾಯಿ -3
•ಕೊತ್ತಂಬರಿ ಬೀಜ – 1 ಚಮಚ
•ಜೀರಿಗೆ. – 1/2 ಚಮಚ
•ಮೆಂತೆ -1/4 ಚಮಚ
•ಉದ್ದಿನಬೇಳೆ -1 ಚಮಚ
•ಸಾಸಿವೆ -1 ಚಮಚ
•ಬ್ಯಾಡಗಿ ಮೆಣಸು(ಉದ್ದ ಮೆಣಸು)-4
•ಗಿಡ್ಡ ಮೆಣಸು -4
•ತೆಂಗಿನ ತುರಿ – 1/2 ಕಪ್
•ಅರಶಿನ ಹುಡಿ -1/4 ಚಮಚ
•ಬೆಲ್ಲ – ಸಿಹಿಗನುಸಾರ
•ಉಪ್ಪು – ರುಚಿಗೆ ತಕ್ಕಷ್ಟು
•ಕರಿಬೇವಿನ ಎಲೆ ಸ್ವಲ್ಪ
•ಎಣ್ಣೆ – 4 ಚಮಚ

Karela Ki Sabji ಮಾಡುವ ವಿಧಾನ:
•ಮೊದಲಿಗೆ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಮಾಡಿ ಕೊಳ್ಳಿ.
•ಬಿಸಿಯಾದ ಎಣ್ಣೆಗೆ ಉದ್ದ ಮೆಣಸು, ಗಿಡ್ಡ ಮೆಣಸು, ಕೊತ್ತಂಬರಿ, ಜೀರಿಗೆ,ಮೆಂತೆ ಉದ್ದಿನಬೇಳೆ ಒಂದೊಂದಾಗಿ ಸೇರಿಸಿ ಹುರಿಯಿರಿ.
•ಹುರಿದ ಮಿಶ್ರಣವನ್ನು ಮಿಕ್ಸಿ ಜಾರ್ ಗೆ ಹಾಕಿ.
•ತೆಂಗಿನ ತುರಿ,ಹುಳಿ ಹಾಗೂ ನೀರನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
•ರುಬ್ಬಿಟ್ಟ ಮಿಶ್ರಣವನ್ನು ಬದಿಗಿಡಿ.
•ಈಗ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲಿನ ಒರಟುತನವನ್ನು ಚಾಕುವಿನಿಂದ ಮೆದುವಾಗಿ ತೆಗೆದುಕೊಳ್ಳಿ.
•ನಂತರ ಅದನ್ನು ಉದ್ದವಾಗಿ ಸೀಳಿ ಅದರೊಳಗಿನ ಬೀಜಗಳನ್ನು ತೆಗೆಯಿರಿ.
•ನಂತರ ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಿ.
•ಕತ್ತರಿಸಿದ ಹಾಗಲಕಾಯಿಯನ್ನು ಉಪ್ಪಿನೊಂದಿಗೆ 30ನಿಮಿಷಗಳ ಕಾಲ ಬೆರೆಸಿಡಿ.
•ನಂತರ ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ನೀರನ್ನು ಚೆನ್ನಾಗಿ ಬಸಿದು ಅಥವಾ ಹಿಂಡಿ ಪಾತ್ರೆಯಲ್ಲಿ ತೆಗೆದಿಡಿ.
•ಈಗ ಒಂದು ಬಾಣಲೆಯನ್ನು ಒಲೆಯಲ್ಲಿಟ್ಟು ಬಾಣಲೆ ಬಿಸಿಯಾದ ನಂತರ ಎಣ್ಣೆ ಹಾಕಿ.
•ಎಣ್ಣೆ ಬಿಸಿಯಾದ ಬಳಿಕ ಸಾಸಿವೆ ಹಾಕಿ ಸಿಡಿಸಿ ಹಾಗೂ ಜೊತೆಗೆ ಕರಿಬೇವಿನ ಎಲೆಗಳನ್ನು ಸೇರಿಸಿಕೊಳ್ಳಿ.
•ಈಗ ಹಾಗಲಕಾಯಿಯನ್ನು ಬಾಣಲೆಗೆ ಹಾಕಿ (ಹಾಕುವಾಗ ಜಾಗ್ರತೆಯಿಂದಿರೇಕು)
•ಈಗ ಹಾಗಲಕಾಯಿ /ಕರೇಲಾವನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಹುರಿಯಿರಿ.
•ಈಗ ಅದಕ್ಕೆ ಬೇಕಾದಷ್ಟು ಉಪ್ಪು ಸೇರಿಸಿ ಜೊತೆಗೆ ಅರಶಿನ ಹುಡಿಯನ್ನು ಸೇರಿಸಿಕೊಂಡು ಬಾಣಲೆ ಮುಚ್ಚಿಟ್ಟು ಮಧ್ಯಮ ಉರಿಯಲ್ಲಿ ಯಾವುದೇ ನೀರನ್ನು ಸೇರಿಸದೆ 5 ನಿಮಿಷಗಳವರೆಗೆ ಬೇಯಿಸಿ.
•ಈಗ ಹಾಗಲಕಾಯಿಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಹಾಗಲಕಾಯಿ ಚೆನ್ನಾಗಿ ನೀರು ಬಿಟ್ಟುಕೊಂಡಿರುತ್ತದೆ.ಹೆಚ್ಚಿಗೆ ನೀರು ಸೇರಿಸುವ ಅಗತ್ಯವಿಲ್ಲ.ಅದೇ ನೀರಿನಲ್ಲಿ ಬೇಯಿಸಿ .ಜೊತೆಗೆ ಬೇಕಾದಷ್ಟು ಬೆಲ್ಲವನ್ನು ಸೇರಿಸಿ ಮುಚ್ಚಿಟ್ಟು ಮತ್ತೆ 10ನಿಮಿಷಗಳವರೆಗೆ ಬೇಯಿಸಿ.
•ಈಗ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಉಪ್ಪು ಮತ್ತು ಬೆಲ್ಲದ ರುಚಿಯನ್ನು ನೋಡಿಕೊಳ್ಳಿ.ಬೇಕಿದ್ದಲ್ಲಿ ಸೇರಿಸಿಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಿಟ್ಟು ಮತ್ತೆ 5 ನಿಮಿಷಗಳ ಕಾಲ ಬೇಯಿಸಿ.
•ಈಗ ಕರೇಲಾವನ್ನು ಚೆನ್ನಾಗಿ ಮಿಕ್ಸ್ ಮಾಡಿ.
•ಈಗ ರುಬ್ಬಿಕೊಂಡ ಮಿಶ್ರಣವನ್ನು ಕರೇಲಾಗೆ ಸೇರಿಸಿಕೊಳ್ಳಿ.ಮಿಕ್ಸಿ ಜಾರ್ ನ್ನು ತೊಳೆದುಕೊಂಡು ಅದರ ನೀರನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
•ಈಗ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿ.
ಈಗ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ Karela Ki Sabji ರೆಡಿ.

ಬಿಸಿ ಬಿಸಿಯಾದ ಅನ್ನ,ಗಂಜಿ,ರೊಟ್ಟಿ ಅಥವಾ ಚಪಾತಿ ಯೊಂದಿಗೆ Karela Ki Sabji ಉತ್ತಮವಾಗಿರುತ್ತದೆ. ಈ ರೀತಿಯಾಗಿ Karela Ki Sabji ಮಾಡಿದರೆ ಬಹಳ ರುಚಿಯಾಗಿರತ್ತದೆ. Karela Ki Sabji ಬೇಡವೇ ಬೇಡ ಎಂದು ದೂರತಳ್ಳುವವರು ಈ ರೀತಿಯಾಗಿ ಒಮ್ಮೆ ಮಾಡಿ ನೋಡಿ. ಖಂಡಿತ ಇಷ್ಟ ಪಟ್ಟು ತಿನ್ನುತ್ತೀರಿ.ಬೆಲ್ಲದ ಪ್ರಮಾಣವನ್ನು ಜಾಸ್ತಿ ಮಾಡಿದರೆ ಮಕ್ಕಳೂ ಇಷ್ಟ ಪಡುತ್ತಾರೆ.
ಖಂಡಿತ ನೀವೂ ಕೂಡ ಈ ಹಾಗಲಕಾಯಿಯ ರೆಸಿಪಿಯನ್ನು ಟ್ರೈ ಮಾಡಿ ಈ ತರಕಾರಿಯ ಹಲವಾರು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಿ.ಇದು ಭಾರತೀಯ ಸಾಂಪ್ರದಾಯಿಕ ರೆಸಿಪಿ.ನಮ್ಮ ನಮ್ಮ ರುಚಿಗನುಸಾರವಾಗಿ ಪದಾರ್ಥಗಳನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.
ಕರೇಲಾವನ್ನು ಉಪ್ಪಿನಲ್ಲಿ ಬೆರೆಸಿಡುವುದರಿಂದ ಅದರ ಕಹಿಯ ಅಂಶ ದೂರವಾಗುತ್ತದೆ.

Leave a Comment

close
Thanks !

Thanks for sharing this, you are awesome !