ಹುಬ್ಭಳ್ಳಿ: ಕರ್ನಾಟಕ ದ ಆರಂಭಿಕ ಆಟಗಾರನಾಗಿ ನಾಯಕ ಮಯಾಂಕ್ ಅಗರ್ವಾಲ್ ಯಾವುದೇ ರನ್ ಗಳಿಸದೆ ಪೆವಿಲಿಯನ್ ಸೇರಿಕೊಂಡರು.ದ್ವಿತೀಯ ವಿಕೆಟ್ ಗೆ ಜತೆಗೂಡಿದ ಆರ್.ಸಮರ್ಥ್ ಮತ್ತು ಪಡಿಕ್ಕಲ್ 76 ರನ್ ಗಳಿಸಿ ತಂಡದ ನೆರವಿಗೆ ನಿಂತರು.ಬಳಿಕ 38 ರನ್ ಗಳಿಸಿ ಸಮರ್ಥ್ ವಿಕೆಟ್ ಕಳೆದುಕೊಂಡರು.ನಂತರ ನಿಕಿನ್ ಜೋಸ್ ಆಟ ಎಂಟೇ ರನ್ನಿಗೆ ಮುಗಿಯಿತು.ರಣಜಿ ಟ್ರೊಫಿಯಲ್ಲಿ ಪಡಿಕ್ಕಲ್ನ ಅಮೋಘ ಆಟವಾಯಿತು.
ಪಡಿಕ್ಕಲ್ ಅತ್ಯಂತ ಪರಿಣಾಮಕಾರಿಯಾಗಿ ಆಟವಾಡಿ ಪಂಜಾಬ್ ಬೌಲರ್ ಗಳನ್ನು ಸುಸ್ತಾಗಿಸಿದರು.ಅವರ 80 ರನ್, 80 ಎಸೆತಗಳಿಂದ ದಾಖಲಾಯಿತು. 14 ಬೌಂಡರಿ ಬಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.