ನೆದರ್ಲೆಂಡ್ಸ್ : ಭಾರತದ ನಂ.1 ಚೆಸ್‌ಪಟು ಪ್ರಜ್ಞಾನಂದ! ವಿಶ್ವನಾಥನ್ ಆನಂದ್ ಗೆ ಯಾವ ಸ್ಥಾನ? ಟೀನೇಜ್ಡ್ ಸೂಪರ್ ಸ್ಟಾರ್ ಆರ್.ಪ್ರಜ್ಞಾನಂದ ಭಾರತದ ನಂ.1 ಚೆಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.ಲೆಜೆಂಡ್ರಿ ಚೆಸ್ ಪಟು ವಿಶ್ವನಾಥನ್ ಆನಂದ್ ಅವರನ್ನು ಈ ಪಟ್ಟದಿಂದ ಕೆಳಗಿಳಿಸಿದ್ದಾರೆ.
ನೆದರ್ಲೆಂಡ್ಸ್ ನಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ ನಲ್ಲಿ ವಿಶ್ವ ಚಾಂಪಿಯನ್ ಆಟಗಾರ ಚೀನದ ಡಿಂಗ್ ಲಿರೆನ್ ಅವರಿಗೆ 4ನೇ ಸುತ್ತಿನಲ್ಲಿ ಸೋಲಿಸುವ ಮೂಲಕ ಆರ್.ಪ್ರಜ್ಞಾನಂದ ಅಗ್ರಸ್ಥಾನಕ್ಕೇರಿದ್ದಾರೆ. ಇವರ ಒಟ್ಟು ಫಿಡೆ ರೇಟಿಂಗ್ ಅಂಕವೀಗ 2748.3 ಕ್ಕೇರಿದೆ. 5 ಬಾರಿಯ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಹೊಂದಿರುವ ಅಂಕ 2748.
.3ರಿಂದ ಪ್ರಜ್ಞಾನಂದ ಭಾರತದ ನಂ.1 ಚೆಸ್ ಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಡಿಂಗ್ ಲಿರೆನ್ ವಿರುದ್ಧ ಕಪ್ಪು ಕಾಯಿಗಳೊಂದಿಗೆ ಆಡಳಿಲಿದ ಆರ್.ಪ್ರಜ್ಞಾನಂದ 62 ನಡೆಗಳಲ್ಲಿ ಗೆಲುವು ಸಾಧಿಸಿದರು.ಇದರೊಂದಿಗೆ ಹಾಲಿ ವಿಶ್ವಚಾಂಪಿಯನ್ ಆಟಗಾರರನ್ನು ಮಣಿಸಿದ ಭಾರತದ 2 ನೇ ಚೆಸ್ ಆಟಗಾರನೆನಿಸಿದರು.ವಿಶ್ವನಾಥನ್ ಆನಂದ್ ಮೊದಲಿಗರಾಗಿದ್ದಾರೆ. 2023 ರ ಟಾಟಾ ಸ್ಟೀಲ್ ಟೂರ್ನಿಯಲ್ಲಿ ಪ್ರಜ್ಞಾನಂದ ಲಿರೆನ್ ವಿರುದ್ಧ ಜಯ ಸಾಧಿಸಿದ್ದರು.
13 ಸುತ್ತುಗಳ ಪಂದ್ಯಾವಳಿ
ʼಇದೊಂದು ಸಂತೋಷದ ಸಂಗತಿ. ಆದರೆ ನನ್ನ ವೈಯಕ್ತಿಕ ಗುರಿ ಏನಿದ್ದರೂ ಅತ್ಯುತ್ತಮ ಪ್ರದರ್ಶನ ನೀಡುವುದು.ಇದು ಅತ್ಯಂತ ಕಠಿಣ ಪಂದ್ಯಾವಳಿ,ಉಳಿದೆಲ್ಲಾ ಟೂರ್ನಿಗಳು 9 ಸುತ್ತುಗಳನ್ನು ಹೊಂದಿದ್ದರೆ ಇಲ್ಲಿ 13 ಸುತ್ತುಗಳಿವೆ.ಅಂದರೆ ಒಂದು ಹೆಚ್ಚುವರಿ ಕೂಟವನ್ನು ಆಡಿದ ಅನುಭವವಾಗುತ್ತದೆʼ ಎಂಬುದಾಗಿ ಪ್ರಜ್ಞಾನಂದ ಹೇಳಿದರು. ಮಾಸ್ಟರ್ ರೌಂಡ್ ನಲ್ಲಿ ಪ್ರಜ್ಞಾನಂದ 2.5 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಗುರುವಾರದ 5ನೇ ಸುತ್ತಿನ ಪಂದ್ಯದಲ್ಲಿ ಆರ್.ಪ್ರಜ್ಞಾನಂದ ಅಗ್ರಸ್ಥಾನಿಯಾಗಿರುವ ,ಅತಿಥೇಯ ದೇಶದ ಅನಿಶ್ ಗಿರಿ ವಿರುದ್ಧ ಆಡಲಿದ್ದಾರೆ.ಭಾರತದ ಡಿ.ಗುಕೇಶ್ ಅವರನ್ನು ಮಣಿಸಿರುವ ಅನಿಶ್ ಗಿರಿ 3.5 ಅಂಕ ಹೊಂದಿದ್ದಾರೆ.