ಜ.13 ರಂದು ಕೆ-ಸೆಟ್‌ ಪರೀಕ್ಷೆ!ಪುರುಷರ ಹಾಗೂ ಮಹಿಳೆಯರ ತೊಡುಗೆಗಳು ಹೇಗಿರಬೇಕು?

ಜ.13 ರಂದು ಕೆ-ಸೆಟ್‌ ಪರೀಕ್ಷೆ!2023-2024

ಬೆಂಗಳೂರು : ಜ.13ರಂದು ನಡೆಯುವ ಕೆ.ಸೆಟ್‌ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು https://kea.kar.nic.in ವೆಬಸೈಟ್ ನಿಂದ ಪ್ರವೇಶ ಪತ್ರವನ್ನು ಡೌನ್ ಲೋಡ್‌ ಮಾಡಿಕೊಳ್ಳಬೇಕು ಹಾಗೂ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಪ್ರವೇಶ ಪತ್ರ ಮತ್ತುಸರಕಾರದಿಂದ ಮಾನ್ಯವಾಗಿರುವ ನಿಗದಿತ ಬಗೆಯ ಗುರುತಿನ ಪತ್ರವನ್ನು ಕಡ್ಡಾಯವಾಗಿ ತೋರಿಸಬೇಕು.ಜತೆಗೆ ಪ್ರವೇಶ ಪತ್ರದಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರದಲ್ಲಷ್ಟೇ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು.ಅಲ್ಲದೆ ಇತ್ತೀಚಿನ ಎರಡು ಭಾವಚಿತ್ರಗಳನ್ನು ತರಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

ಜ.13 ರಂದು ಕೆ-ಸೆಟ್‌ ಪರೀಕ್ಷೆ
ಜ.13 ರಂದು ಕೆ-ಸೆಟ್‌ ಪರೀಕ್ಷೆ

Read More :

ಪರೀಕ್ಷೆಯು ಬೆಳಿಗ್ಗೆ 10ರಿಂದ 11 ಗಂಟೆ ಮತ್ತು ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ನಡೆಯಲಿದ್ದು ಇದರ ನಡುವೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಹೋಗಲು ಅವಕಾಶ ಕೊಡಲಾಗುವುದಿಲ್ಲ.OMR ಶೀಟ್ ಮೇಲೆ ಅಭ್ಯರ್ಥಿಗಳೇನಾದರೂ ತಮ್ಮ ನೋಂದಣಿ ಸಂಖ್ಯೆ ,ವಿಷಯದ ಕೋಡ್‌ ಮತ್ತು ಪರೀಕ್ಷಾ ಕೇಂದ್ರದ ಕೋಡ್ ನ್ನುತಪ್ಪಾಗಿ ನಮೂದಿಸಿದಲ್ಲಿ ಅಂಥವರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

 ಅಭ್ಯರ್ಥಿಗಳ ಉಡುಗೆ ತೊಡುಗೆಗಳು ಹೀಗಿರಬೇಕು:

ಪುರುಷ ಅಭ್ಯರ್ಥಿಗಳಿಗೆ ಅರೆತೋಳಿನ ಅಂಗಿ,ಹೆಚ್ಚು ಜೇಬುಗಳಿಲ್ಲದ ಸರಳವಾದ ಪ್ಯಾಂಟ್‌ ಕಾಡ್ಡಾಯವಾಗಿದೆ.ವಿಸ್ತಾರ ಕಸೂತಿ ಇರುವ ಉಡುಪು ಹಾಗೂ ಶೂಗಳನ್ನು ನಿಷೇಧಿಸಲಾಗಿದೆ.

ಮಾಹಿಳಾ ಅಭ್ಯರ್ಥಿಗಳಿಗೆ ವಿಪರೀತ ಕಸೂತಿ,ಹೂಗಳು,ಬಟನ್‌,ಪೂರ್ಣ ತೋಳಿನ ರವಿಕೆ,ಜೀನ್ಸ್‌ ಪ್ಯಾಂಟ್ ಹಾಗೂ ದಪ್ಪನೆ ಅಡಿಭಾಗವಿರುವ ಚಪ್ಪಲಿ/ಶೂಗಳನ್ನು ಧರಿಸಿಕೊಂಡು ಬರುವುದನ್ನು ನಿಷೇಧಿಸಲಾಗಿದೆ.

ಜೊತೆಗೆ ಮಂಗಳಸೂತ್ರ ಹಾಗೂ ಕಾಲುಂಗುರ ಹೊರತುಪಡಿಸಿ ಬೇರಾವುದೇ ಆಭರಣಗಳನ್ನು ಹಾಕಿಕೊಂಡು ಪರೀಕ್ಷಾಕೇಂದ್ರಕ್ಕೆ ಬರುವಂತಿಲ್ಲ.

ಜೊತೆಗೆ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಪಣ ತೊಟ್ಟಿರುವ ಪರೀಕ್ಷಾ ಪ್ರಾಧಿಕಾರವು ಯಾವುದೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬ್ಲೂಟೂತ್‌,ಮೊಬೈಲ್‌ ಫೋನ್‌,ಎಲೆಕ್ಟ್ರಾನಿಕ್‌ ವಸ್ತುಗಳು,ಪೆನ್‌ ಡ್ರೈವ್‌,ಇಯರ್‌ ಫೋನ್‌,ಕೈ ಗಡಿಯಾರ,ಮೈಕ್ರೋಫೋನ್‌,ಪೆನ್ಸಿಲ್‌,ಇರೇಸರ್‌,ಜಾಮಿಟ್ರಿ ಪೆಟ್ಟಿಗೆ ಮತ್ತು ಲಾಗ್‌ ಟೇಬಲ್‌ ಮುಂತಾದವುಗಳನ್ನು ತರುವಂತಿಲ್ಲ ಎಂದು ಸೂಚನೆ ನೀಡಿದೆ.

Leave a Comment

close
Thanks !

Thanks for sharing this, you are awesome !