ಬೆಂಗಳೂರು : ಗ್ರಹಜ್ಯೋತಿ : ಹೆಚ್ಚುವರಿ ವಿದ್ಯುತ್ 10 ಯುನಿಟ್ ಗೆ ನಿಗದಿ .ಕರ್ನಾಟಕ ಗೃಹಜ್ಯೋತಿ ಯೋಜನೆಯ ಬಳಕೆದಾರರಿಗೆ ಇದುವರೆಗೆ ನೀಡುತ್ತಿದ್ದ ಶೇ.10 ರಷ್ಟು ಹೆಚ್ಚುವರಿ ಅರ್ಹತಾ ವಿದ್ಯುತನ್ನು 10 ಯುನಿಟ್ ಗೆ ಮಾಡುವ ಮಹತ್ವದ ನಿರ್ಧಾರವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ಈ ವಿಷಯ ತಿಳಿಸಿದ್ದು, ಇನ್ನು ಮುಂದೆ ಕಳೆದ 12 ತಿಂಗಳ ಸರಾಸರಿ ಬಳಕೆಯ ಜೊತೆಗೆ ಶೇ.10 ರಷ್ಟು ಉಚಿತ ವಿದ್ಯುತ್ ನೀಡುವ ಬದಲು ಎಲ್ಲರಿಗೂ ಅನ್ವಯವಾಗುವಂತೆ 10 ಯುನಿಟ್ ಗೆ ಮಿತಿ ಮಾಡಲಾಗುತ್ತದೆ. ಹೀಗಾಗಿ ಗೃಹಜ್ಯೋತಿ ಯೋಜನೆ ಅನ್ವಯ ವಿವಿಧ ಹಂತದ ಸರಾಸರಿ ಯುನಿಟ್ ಬಳಕೆದಾರರಿಗೆ ನೀಡುವ ಅರ್ಹತಾ ವಿದ್ಯುತ್ ನಲ್ಲಿ ಏಕರೂಪತೆ ತರಲಾಗುತ್ತದೆ ಎಂದು ತಿಳಿಸಿದರು.