ಗೋವಾ vs ಕರ್ನಾಟಕ : ರಣಜಿ ಟ್ರೋಫಿ 2023-24

ಮೈಸೂರು : ಗೋವಾ vs ಕರ್ನಾಟಕ : ರಣಜಿ ಟ್ರೋಫಿ 2023-24 ಮೈಸೂರಿನ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡಿತು. 3ನೇ ಸುತ್ತಿನ ʼಸಿʼ ವಿಭಾಗದ ರಣಜಿ ಪಂದ್ಯದಲ್ಲಿ ಕರ್ನಾಟಕ ಬೌಲರ್ಸ್‌ ಗೋವಾಕ್ಕೆ ಕಡಿವಾಣ ಹಾಕಿದ್ದಾರೆ. ಮೊದಲ ದಿನದಾಟ ದ ಅಂತ್ಯಕ್ಕೆ ಗೋವಾ 8 ವಿಕೆಟಿಗೆ 228 ರನ್‌ ಗಳಿಸಿದೆ.

ಗೋವಾ vs ಕರ್ನಾಟಕ : ರಣಜಿ ಟ್ರೋಫಿ 2023-24
ಗೋವಾ vs ಕರ್ನಾಟಕ : ರಣಜಿ ಟ್ರೋಫಿ 2023-24

Read More

45 ರನ್ನಿಗೆ ಗೋವಾದ 3 ವಿಕೆಟ್ ಗಳನ್ನು ಕರ್ನಾಟಕ ಉರುಳಿಸಿತು. ಟಾಪ್‌ ಆರ್ಡರ್‌ ಬ್ಯಾಟರ್‌ ಗಳಾದ ಇಶಾನ್‌ ಗಾಡೇಕರ್‌ (6), ಕೀಪರ್‌ ಕೆ.ಸಿದ್ದಾರ್ಥ್‌ (2) , ಮತ್ತು ಸುಯಶ್‌ ಪ್ರಭುದೇಸಾಯಿ(24) ರನ್‌ ಗಳಿಸಿ ಯಶಸ್ಸು ಕಾಣಲಿಲ್ಲ. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ ಗಳಾದ ಸ್ನೇಹಲ್‌ ಕೌಥಂಕರ್‌ ಮತ್ತು ನಾಯಕ ದರ್ಶನ್‌ ಮಿಸಾಲ್‌ ಸೇರಿಕೊಂಡು ಹೋರಾಟವನ್ನು ಜಾರಿಯಲ್ಲಿರಿಸಿದರು. ಇವರು 4 ನೇ ವಿಕೆಟ್‌ ಗೆ 82 ರನ್‌ ಸೇರಿಸಿದರು. ಕೌಥಂಕರ್‌ 193 ಎಸೆತಗಳನ್ನು ನಿಭಾಯಿಸಿ 83 ರನ್‌ ಹೊಡೆದರು. (ಇದರಲ್ಲಿ 9 ಬೌಂಡರಿ,1 ಸಿಕ್ಸರ್). ಮಿಸಾಲ್‌ ರವರು 39 ರನ್‌ ಗಳಿಸಿದರು.(98 ಎಸೆತದಲ್ಲಿ 4 ಬೌಂಡರಿ).

ಈ ಜೋಡಿಯನ್ನು ರೋಹಿತ್‌ ಕುಮಾರ್‌ ಪೆವಿಲಿಯನ್‌ ಗೆ ಕಳುಹಿಸಿದರು. ನಂತರ ಸ್ಕೋರ್‌ 198 ಕ್ಕೆ ಏರಿದಾಗ ಕೌಥಂಕರ್‌ ಅವರನ್ನು ವಾಪಾಸ್‌ ಕಳುಹಿಸಲು ಎಂ.ವೆಂಕಟೇಶ್‌ ಯಶಸ್ವಿಯಾದರು.ಅರ್ಜುನ್‌ ತೆಂಡುಲ್ಕರ್‌  10 ರನ್‌ ಮತ್ತು ಹೇರಂಬ ಪರಮ್‌ 8 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ತಲಾ 3 ವಿಕೆಟ್‌ ಉರುಳಿಸಿದ ವಿಜಯ್‌ ಕುಮಾರ್‌ ವೈಶಾಖ್‌ ಮತ್ತು ರೋಹಿತ್‌ ಕುಮಾರ್‌ ಕರ್ನಾಟಕದ ಯಶಸ್ವಿ ಬೌಲರ್ ಗಳು.

Leave a Comment

close
Thanks !

Thanks for sharing this, you are awesome !