ಇಂದು ಶುಕ್ರವಾರದಿಂದ ಅಂಡರ್-19‌ ವಿಶ್ವಕಪ್‌ ಕ್ರಿಕೆಟ್

ಬ್ಲೋಮ್ ಫಾಂಟೇನ್‌ : ಇಂದು ಶುಕ್ರವಾರದಿಂದ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಕೂಟವು ದಕ್ಷಿಣ ಆಫ್ರಿಕಾ ದ ವಿವಿಧ ತಾಣಗಳಲ್ಲಿ ಆರಂಭವಾಗಲಿದೆ.ಮೊದಲ ದಿನ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ಹಾಗೂ ಅಮೇರಿಕಾ ಮತ್ತು ಐರ್ಲೆಂಡ್‌ ನ ನಡುವೆ ಪಂದ್ಯಗಳು ನಡೆಯಲಿವೆ. ಐದು ಬಾರಿಯ ಚಾಂಪಿಯನ್‌ ಭಾರತವು ಶುಕ್ರವಾರ ನಡೆಯುವ ಪಂದ್ಯದಲ್ಲಿ ಬಾಂಗ್ಲಾ ದೇಶವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಇಂದು ಶುಕ್ರವಾರದಿಂದ ಅಂಡರ್-19‌ ವಿಶ್ವಕಪ್‌ ಕ್ರಿಕೆಟ್
ಇಂದು ಶುಕ್ರವಾರದಿಂದ ಅಂಡರ್-19‌ ವಿಶ್ವಕಪ್‌ ಕ್ರಿಕೆಟ್

Read More

ಈ ಕೂಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು ಇವುಗಳನ್ನು ನಾಲ್ಕು ಬಣಗಳನ್ನಾಗಿ ವಿಂಗಡಿಸಲಾಗಿದೆ. ಮೊದಲ ಸುತ್ತಿನ ಹೋರಾಟದ ಬಳಿಕ 12 ತಂಡಗಳು ಸೂಪರ್‌ ಸಿಕ್ಸ್‌ ಹಂತಕ್ಕೇರಲಿವೆ. ಇಲ್ಲಿ ಎರಡು ಬಣಗಳಲ್ಲಿ ಪಂದ್ಯಗಳು ನಡೆಯಲಿದ್ದು ಪ್ರತಿ ಬಣದ ಎರಡು ಅಗ್ರ ತಂಡಗಳು ಸೆಮಿ ಫೈನಲ್‌ ಗೆ ಹೋಗಲಿವೆ. ಸೆಮಿಫೈನಲ್‌ ಪಂದ್ಯಗಳು ಬೆನೋನಿಯಲ್ಲಿ ಫೆ.6 ಮತ್ತು ಫೆ.8 ರಂದು ನಡೆಯಲಿದ್ದು ಫೆ.11 ರಂದು ಫೈನಲ್‌ ನಡೆಯಲಿದೆ.

ಭಾರತ ತಂಡವನ್ನು ಈ ಬಾರಿ ಪಂಜಾಬ್‌ ನ ಉದಯ್‌ ಸಹರನ್‌ ಅವರು ಮುನ್ನಡೆಸುತ್ತಿದ್ದಾರೆ. ಭಾರತವು ʼಎʼ ಬಣದಲ್ಲಿದ್ದು ಅಮೆರಿಕಾ ಮತ್ತು ಐರ್ಲೆಂಡ್‌ ಈ ಬಣದಲ್ಲಿರುವ ಇನ್ನೆರಡು ತಂಡಗಳು.

ಅಂಡರ್‌-19 ವಿಶ್ವಕಪ್‌ ನಲ್ಲಿ ಆಸ್ಟ್ರೇಲಿಯ ಎರಡನೇ ಶ್ರೇಷ್ಠ ತಂಡವಾಗಿದೆ. ಆಸ್ಟ್ರೇಲಿಯಾ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಪಾಕಿಸ್ಥಾನ ಎರಡು ಬಾರಿ ಗೆದ್ದಿದ್ದರೆ, ಬಾಂಗ್ಲಾದೇಶ, ದ. ಆಫ್ರಿಕಾ, ವೆಸ್ಟ್‌ ಇಂಡೀಸ್‌ ಹಾಗೂ ಇಂಗ್ಲೆಂಡ್‌ ಒಮ್ಮೆ ಜಯಿಸಿತ್ತು.

 

Leave a Comment

close
Thanks !

Thanks for sharing this, you are awesome !