ಅಯೋಧ್ಯಾಪುರಿಯ ನವಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭ

ಅಯೋಧ್ಯೆ : ಅಯೋಧ್ಯಾಪುರಿಯ ನವಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ .ಹಲವು ಶತಮಾನಗಳ ಕಾಯುವಿಕೆಗೆ ಸೋಮವಾರ ಫಲ ಸಿಗಲಿದೆ. ಭವ್ಯವಾದ ಶ್ರೀರಾಮಮಂದಿರವು ರಾಮನ ಜನ್ಮಭೂಮಿಯಲ್ಲಿ ಉಧ್ಘಾಟನೆಗೊಳ್ಳಲಿದೆ. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿರುವ 51 ಇಂಚಿನ ಬಾಲರಾಮ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನೆರವೇರುವುದರೊಂದಿಗೆ ಮಂದಿರದ ಉಧ್ಘಾಟನೆಯೂ ನಡೆಯಲಿದೆ.ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ 7 ಸಾವಿರ ಅತಿಥಿಗಳು ಈ ದಿವ್ಯ ಘಳಿಗೆಗೆ ಪ್ರತ್ಯಕ್ಷ ಸಾಕ್ಷಿಯಾಗಲಿದ್ದಾರೆ.

ಅಯೋಧ್ಯಾಪುರಿಯ ನವಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭ
ಅಯೋಧ್ಯಾಪುರಿಯ ನವಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭ

Read More

ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಮಧ್ಯಾಹ್ನ 12.20 ರಿಂದ 12.45 ರ ಅಭಿಜಿನ್‌ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನ ವಿಧಿ ಮುಖ್ಯಹಂತಕ್ಕೆ ತಲುಪಲಿದೆ. ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಬಾಲರಾಮನ ವಿಗ್ರಹಕ್ಕೆ ನೇತ್ರೋನ್ಮಿಲನ ಅಂದರೆ ಕಣ್ಣು ತೆರೆಸುವ ಕ್ರಿಯೆ ಯನ್ನು ನಡೆಸಿಕೊಡಲಿದ್ದಾರೆ.

Leave a Comment

close
Thanks !

Thanks for sharing this, you are awesome !